Yellow Browed Bulbul

ನಮ್ಮ ಹಕ್ಕಿಗಳ ಗುಂಪಿನಲ್ಲೇ ನೋಡಿದ್ದ ಇನ್ನೊಂದು ಹಕ್ಕಿ ಎಂದರೆ yellow browed bulbul.. ಹಳದಿ ಬಣ್ಣದ ಹಕ್ಕಿಗಳು ಎಷ್ಟಿವೆ ಅಂದರೆ ನನಗೆ ಮೊದಲು ಯಾವ ಹಕ್ಕಿಯನ್ನು ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ. ಎಲ್ಲವೂ ಒಂದೇ ರೀತಿ ಕಾಣುತ್ತಿದ್ದವು. ಆಮೇಲೆ ನನ್ನ ಸ್ನೇಹಿತರಿಗೆ ಹೇಳಿ ಹಳದಿ ಬಣ್ಣದ ಯಾವ ಹಕ್ಕಿಗಳಿವೆ ಅಂತ ನೋಡೋಕೆ ಹೇಳಿದೆ. Iora, Oriole ಎಲ್ಲ ಹಕ್ಕಿಗಳ ಚಿತ್ರದ ಜೊತೆ yellow browed bulbul ಚಿತ್ರ ಸಹ ನನ್ನ whatsapp ಅಲ್ಲಿ ಬಂದು ಬಿದ್ದಿತ್ತು. ಕೊನೆಗೆ ಹೆಚ್ಚು ಕಡಿಮೆ ಎಲ್ಲ ಚಿತ್ರಗಳನ್ನು ನೋಡಿ ತುಲನೆ ಮಾಡಿ ನಾನು ನೋಡಿದ್ದು yellow browed ಬುಲ್‌ಬುಲ್ ಇರಬಹುದು ಎಂದುಕೊಂಡೆ. ಆದರೆ ಅದೀ ಎಂದು ಖಚಿತವಾಗಿ ಗೊತ್ತಾಗಲಿಲ್ಲ.

922228751509e85703a597

Yellow browed bulbul

Yellow_browed_bulbul

Yellow browed bulbul

ವಾರಕ್ಕೊಮ್ಮೆ ಅಲ್ಲಿ ಇಲ್ಲಿ ಬಂದು ಕಂಡೂ ಕಾಣದಂತೆ ಹಾರಿ ಹೋಗುವ ಈ ಹಕ್ಕಿಯನ್ನು ಗಮನಿಸಲು ಆಗಿನ್ನೂ binonculars ಸಹ ಇರಲಿಲ್ಲ. ಅವತ್ತೊಂದು ದಿನ ಹಾಗೆ ಕುಳಿತುಕೊಂಡು ಹಕ್ಕಿಗಳ ಆಗಮನವನ್ನು ನಿರುಕಿಸುತ್ತಿದ್ದಾಗ ಬಂದವು ಮತ್ತವೇ ಹಳದಿ ಬಣ್ಣದ ಹಕ್ಕಿಗಳು. wikipedia ತೆರೆದು  ಓದಿದಾಗ ತುಂಬಾ ಹೋಲಿಕೆಗಳು ಕಂಡುಬಂದಿತ್ತು. audio ಕ್ಲಿಪ್ ಇತ್ತು ಅದರಲ್ಲಿ. ಪ್ಲೇ  ಮಾಡಿದೆ ನೋಡೋಣ ಅಂತ. ಯಾವತ್ತೂ ಹತ್ತಿರಕ್ಕೆ ಬರದ,ಮರದ ಎಲೆಗಳ ನಡುವೆ ಅವಿತು ಕುಳಿತುಕೊಳ್ಳುವ ಈ ಬುಲ್‌ಬುಲ್ ಗಳು ,ಅವತ್ತು ಮಾತ್ರ ನಾನು ನಿಂತ ಮರದ ಹತ್ತಿರದಲ್ಲೇ ಸುತ್ತಾಡುತ್ತಾ ಮರುದನಿ ಹೊರಡಿಸತೊಡಗಿದವು. ಇಂತಹ ಅನುಭವ ಯಾವತ್ತೂ ಆಗಿರಲಿಲ್ಲ. ಬೇರೆ bulbul ಗಳ, drongo ಗಳ ದ್ವನಿಯನ್ನೆಲ್ಲ ಡೌನ್‌ಲೋಡ್ ಮಾಡಿ  ಯಾವುದಾದರೂ ಹಕ್ಕಿ ಓಗೊಡುತ್ತದೆಯೇನೋ ಎಂದು ಪ್ರಯತ್ನಿಸಿದ್ದೆ. ಯಾವ ಹಕ್ಕಿಯೂ ಮರುತ್ತರ ನೀಡಿರಲಿಲ್ಲ.ಐದಾರು ಬುಲ್‌ಬುಲ್ ಗಳನ್ನು ನೋಡಿದ್ದೆ ಅವತ್ತು.

yellow browed bulbul ಗಳು ಅಪರೂಪಕ್ಕೊಮ್ಮೆ  ಹಣ್ಣಿನ ಮರಗಳಲ್ಲಿ, ಕಾಣಸಿಗುತ್ತವೆ.ಹೆಸರಿಗೆ ಅನ್ವರ್ಥವಾಗಿ ಕಣ್ಣಿನ ಬಳಿ ಹಳದಿ ಬಣ್ಣದ ಗೆರೆ ಇದೆ. ಕಂಡಷ್ಟೇ ವೇಗವಾಗಿ ಮಾಯವಾಗುವ ಇವುಗಳನ್ನು ನೋಡಿದ್ದಷ್ಟೇ ಗೊತ್ತು.

Ruby Throated Bulbul…

ಇನ್ನೇನು ಸೂರ್ಯೋದಯವಾಗುತ್ತಿದೆ. ಸೂರ್ಯನ ಬೆಳಕು ತಾಕುವ ಮೊದಲು ಕಿವಿಗೆ ಕೇಳುವುದು ಹಕ್ಕಿಗಳ ಕಲರವ. ಇದು ದಿನನಿತ್ಯದ ಸಂಗತಿ.  ಎಳೆ ಬಿಸಿಲಿಗೆ ಮೈಯೊಡ್ಡಿ ಖುಷಿಯಲ್ಲಿ ಹಾಡಿಕೊಳ್ಳುವ ಹಕ್ಕಿಗಳನ್ನು ನೋಡುವುದೇ ಸಂಭ್ರಮ.

ಬೆಳಗಾಯಿತು. ಹಕ್ಕಿಗಳೆಲ್ಲ ಗುಂಪುಗೂಡಿ ಆಹಾರ ಹುಡುಕುವ ಸಮಯ. ಹುಳ ಹಿಡುಕ ಹಕ್ಕಿಗಳೆಲ್ಲ ಒಂದುಗೂಡಿ ಮರದಿಂದ ಮರಕ್ಕೆ ಹಾರುತ್ತಾ ಆಹಾರ ಹುಡುಕುತ್ತಿರುತ್ತವೆ. Drongo ಗಳು, treepie ಗಳು ಗುಂಪಿಗೆ ನಾಯಕರಿದ್ದ ಹಾಗೆ. ಅದೆಷ್ಟು ಹಕ್ಕಿಗಳು ಬಂದು ಗುಂಪಿಗೆ ಸೇರಿಕೊಳ್ಳುತ್ತವೆ ಎಂದರೆ ನೋಡುತ್ತಾ ಕುಳಿತರೆ ಕಣ್ಣು ಸಾಲದು. Babblers, Sunbirds, Bulbuls,barbets,woodpeckers,flycatchers ಹೀಗೆ ಲೆಕ್ಕವಿಲ್ಲದಷ್ಟು ಹಕ್ಕಿಗಳು.ಸ್ವಲ್ಪ ಹೊತ್ತಾದ ಮೇಲೆ ಗುಂಪಿನಲ್ಲಿರುವ ದೊಡ್ಡ ಹಕ್ಕಿಗಳಿಗೆ ಆ ಜಾಗ ಬೇಸರವೆನಿಸಿದರೆ ಅಥವಾ ಅಲ್ಲಿ ಆಹಾರ ಖಾಲಿ ಆಯಿತು ಎಂದೆನಿಸಿದರೆ ಅಲ್ಲಿಂದ ಸ್ವಲ್ಪ ದೂರಕ್ಕೆ ಅವುಗಳ ಸವಾರಿ ಸಾಗುತ್ತದೆ. ಉಳಿದೆಲ್ಲ ಹಕ್ಕಿಗಳು ಒಂದೊಂದಾಗಿ ಅವುಗಳನ್ನು ಹಿಂಬಾಲಿಸುತ್ತವೆ. ಗಲಾಟೆ ಮಾಡುವ ದೊಡ್ಡ ದೊಡ್ಡ ಪಕ್ಷಿಗಳ ನಡುವೆ ಸದ್ದೇ ಮಾಡದ ಸಣ್ಣ ಸಣ್ಣ ಹಕ್ಕಿಗಳನ್ನೂ ಕಾಣಬಹುದು. ಇವುಗಳ ಮದ್ಯದಲ್ಲೇ ಕಂಡಿತ್ತು  Ruby throated bulbul.

d97a185d8549af18aeb1bac5069bd2c2

Ruby throated bulbul

black_capped_bulbul__nest_ss

unhatched eggs..:)

ಬೆಳಿಗ್ಗೆ  ತಿಂಡಿ ಮಾಡೇ ಅಂತ ಹೇಳಿದ ಅಮ್ಮಂಗೆ ಈಗ ಬಂದೆ ಅಂತ ಹೇಳಿ ಹಕ್ಕಿಗಳನ್ನ ನೋಡೋಕೆ ಓಡಿ ಹೋಗಿದ್ದೆ. ಅವತ್ತು ಕಂಡಿತ್ತು ಮುದ್ದಾದ ಈ ಹಕ್ಕಿ. ಮಿಡತೆಯೊಂದನ್ನು ಕಚ್ಚಿಕೊಂಡು ಬಂದು ನನ್ನ ಎದುರಿಗೇ ಹಾರಿ ಬಂತು. ತಲೆಯಿಂದ ಕುತ್ತಿಗೆಯವರೆಗೂ ಕಪ್ಪು ಬಣ್ಣ, ಕುತ್ತಿಗೆಯ ಬಳಿ ಕೆಂಪು, ಉಳಿದೆಲ್ಲ ಭಾಗ ಹಳದಿ ಬಣ್ಣದ ಈ ಹಕ್ಕಿಗೆ ಜುಟ್ಟು ಇರಲಿಲ್ಲವಾದರೂ ಸ್ವಲ್ಪ ಉಬ್ಬಿದ ಪುಕ್ಕಗಳಿವೆ. “Black crested bulbul ” ನ ಉಪಜಾತಿಯಾಗಿರುವ ಇದು ಕರ್ನಾಟಕದ ಕಾಡುಗಳಲ್ಲಿ ಕಂಡುಬರುತ್ತದೆ. ಬೇರೆ ಬುಲ್‌ಬುಲ್ ಗಳಂತೆ ಇದು ಸಹ ಬಟ್ಟಲಿನಾಕಾರದ ಗೂಡು ಕಟ್ಟಿ ಒಂದು ಸಾಲಕ್ಕೆ 2-3 ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಗಳು ಕೆಂಪು ಬಣ್ಣದ ಚುಕ್ಕೆಗಳಿಂದ ಕೂಡಿರುತ್ತವೆ. Black crested bulbul ಗೆ ಪ್ರಧಾನವಾಗಿ ಕಾಣುವಂತಹ ಜುಟ್ಟು ಇರುತ್ತದೆ.

95679fae24eb7f6d130ce0e8ae25305e

Black crested yellow bulbul

Photo Courtesy:GOOGLE
.

RED VENTED BULBUL..

Red vented Bulbul

Red vented Bulbul

Red  whiskered Bulbulಗೆ  ಹತ್ತಿರದ ಸಂಬಂಧಿ Red Vented Bulbul.. ಎರಡಕ್ಕೂ ಸಾಮ್ಯತೆಗಳು ಬಹಳ. ತಲೆಯ ಮೇಲೆ ಚಿಕ್ಕದಾದ ಕಂಡೂ ಕಾಣದಂತೆ ಇರುವ ಕಪ್ಪು ಬಣ್ಣದ ಸಣ್ಣ ಜುಟ್ಟು,ಕಂಡು ಬಣ್ಣದ ರೆಕ್ಕೆ,ಬೆನ್ನು  ,ಹುರುಪೆಗಳಂತೆ ಕಾಣುವ ಪುಕ್ಕಗಳು , ಬಾಲದ ಕೆಳಗೆ(vent) ಕೆಂಪು ಬಣ್ಣ ಹಾಗೂ ಬಾಲದ ತುದಿಯಲ್ಲಿ ಬಿಳಿಯ ಬಣ್ಣ ಇರುವ Red Vented Bulbul , ಮನುಷ್ಯ ವಾಸದ ಬಳಿ  ಹೆಚ್ಚಾಗಿ ಕಂಡುಬರುತ್ತವೆ. ದಟ್ಟ ಕಾಡುಗಳಲ್ಲಿ ಅತಿ ವಿರಳವಾಗಿ ಇರುವ ಇವುಗಳು ಹುಲ್ಲು , ಪಾಚಿ, ಜೇಡರ ಬಲೆಗಳನ್ನು ಉಪಯೋಗಿಸಿಕೊಂಡು ಬಟ್ಟಲಿನಾಕಾರದ ಗೂಡು ಕಟ್ಟುತ್ತವೆ. ಒಂದು ಬಾರಿಗೆ ಎರಡರಿಂದ ಮೂರು ಮೊಟ್ಟೆಗಳನ್ನು ಕಾಣಬಹುದು. ಮೊಟ್ಟೆಗಳು ಗುಲಾಬಿ ಬಣ್ಣವಿದ್ದು ,ಕೆಂಪು ಚುಕ್ಕೆಗಳಿಂದ ಕೂಡಿರುತ್ತವೆ.

Red vented bulbul flying

Red vented bulbul flying

ಏಪ್ರಿಲ್ ,ಮೇ ತಿಂಗಳು ಪೂರ್ತಿ ಗೂಡು ಕಟ್ಟಿ ,ಮೊಟ್ಟೆ ಇಟ್ಟು  ಮರಿ ಮಾಡುವ  ಕೆಲಸದಲ್ಲಿ ಇವು ಮಗ್ನ. ಗೂಡು ಕಟ್ಟುವ ಸಮಯದಲ್ಲಿ ಎಷ್ಟು ಜಾಗ್ರತೆ ವಹಿಸುತ್ತವೆ ಎಂದರೆ, ಹತ್ತಿರದಲ್ಲಿ ಮನುಷ್ಯರು ಯಾರಾದರೂ ಇದ್ದರೆ ,ಗೂಡು ಕಟ್ಟುವ ಜಾಗದ ಬಳಿ ಸುಳಿಯುವುದೇ ಇಲ್ಲ. ಬೇರೆ ಎಲ್ಲೋ ಹಾರಿ ಹೋಗುವಂತೆ ನಟಿಸಿ ನಮ್ಮ ದಾರಿ ತಪ್ಪಿಸಲು ಪ್ರಯತ್ನಿಸುತ್ತವೆ. ನಮ್ಮ ತೋಟದಲ್ಲಿ ,  ಬಾಳೆ ಗಿಡಗಳಲ್ಲಿ, ಮೆಣಸಿನ ಬಳ್ಳಿಗಳಲ್ಲಿ  ಎಲ್ಲೆಲ್ಲಿ ನೋಡಿದರೂ  Bulbul ಗಳದ್ದೇ ಗೂಡು.

ಇಂಜಿನಿಯರಿಂಗ್ ಓದುತ್ತಿದ್ದ ಸಮಯ. ಮೂರು ಮಹಡಿಗಳ ಹಾಸ್ಟೆಲ್ ನಮ್ಮದು. ಮೂರನೇ ಮಹಡಿಯಿಂದ ಮೇಲೆ ಹತ್ತಿ ಹೋದರೆ ಒಂದು ಕೋಣೆ ಇತ್ತು. ಅಲ್ಲಿಂದ ಹೊರಗೆ ಹೋಗಲು ಒಂದು ಬಾಗಿಲು. ಆ ಬಾಗಿಲನ್ನು ಯಾವಾಗಲು ತೆಗೆಯುತ್ತಿರಲಿಲ್ಲ. ಹೆಚ್ಚಾಗಿ ಯಾರು ಅಲ್ಲಿಗೆ ಬರುತ್ತಲೂ ಇರಲಿಲ್ಲ. ಅಲ್ಲೊಂದು ದೊಡ್ಡ ಕಿಟಕಿ, ಗಾಳಿ ಬೆಳಕು ಚನ್ನಾಗಿ ಬರುತ್ತಿತ್ತಾದ್ದರಿಂದ ನಾನು ಆ ಕೋಣೆಗೆ ಹೋಗುವ ಮೆಟ್ಟಿಲ ಮೇಲೆ ಕುಳಿತು ಓದಿಕೊಳ್ಳುತ್ತಿದ್ದೆ. May ತಿಂಗಳ ಮೊದಲ ವಾರ. Exam ಇತ್ತೆಂದು ಓದಲು ಹೋಗಿದ್ದೆ  ಅಲ್ಲಿಗೆ. ನನ್ನ ಆಶ್ಚರ್ಯಕ್ಕೆ ಮೆಟ್ಟಿಲ ಮೇಲೊಂದು ಹಕ್ಕಿಯ ಗೂಡು. ಅದು ನಮ್ಮ Red Vented Bulbul. ಹತ್ತಿರ ಹೋಗಿ ನೋಡಿದರೆ ಮೂರು ಮೊಟ್ಟೆಗಳು. ಜಾಣ ಹಕ್ಕಿಯದು, ಕಿಟಕಿಯ ಮುಖಾಂತರ ಒಳಗೆ ಬಂದು ಗೂಡು ಕಟ್ಟಿದೆ. ನಾನು ನೋಡಿ ಛಾಯಾಚಿತ್ರ ತೆಗೆದುಕೊಂಡೆ.ಒಂದೆರಡು ದಿನಗಳಲ್ಲೇ ಮೊಟ್ಟೆ ಮರಿಯಾಯಿತು. ಪ್ರತಿದಿನದ ಬೆಳವಣಿಗೆಯ ಹಂತಗಳನ್ನು ಸೆರೆಹಿಡಿದೆ.ಬೆಳವಣಿಗೆ ಎಷ್ಟು ವೇಗವಾಗಿತ್ತೆಂದರೆ, ಆ ಮೂರು ಮೊಟ್ಟೆಗಳಲ್ಲಿ ಒಂದು ಕೊನೆಯದಾಗಿ ಒಡೆದಿತ್ತು. ಬೇರೆ ಮರಿಗಳಿಗೆ ಹೋಲಿಸಿದರೆ ಕಿರಿಯ ಮರಿಯ ಬೆಳವಣಿಗೆ ನಿಧಾನವಾಗಿತ್ತು. 13-14 ದಿನಗಳಲ್ಲಿ ಮರಿಗಳು ಪೂರ್ತಿಯಾಗಿ ಬೆಳೆದಿದ್ದವು. ಕೊನೆಯ ದಿನ ನಾನು ಆ ಗೂಡಿನ ಬಳಿ ಹೋದಾಗ ಹಕ್ಕಿಮರಿಗಳು ಹಾರಿಹೋದವು.

Eggs..:)

540087_360448687337782_1410574310_n

 556818_360447737337877_362163170_n

ಬೆಳವಣಿಗೆಯ ಹಂತಗಳನ್ನು ಗಮನಿಸಿದರೆ ಮೊದಲು ಹೊರಬಂದ ಮರಿಗೆ ಬೇಗ ಪುಕ್ಕಗಳು ಮೂಡಿರುವುದು ಕಾಣಬಹುದು. ಅವುಗಳಿಗಿರುವುದು ಕೇವಲ ಗಂಟೆಗಳ ವ್ಯತ್ಯಾಸವಷ್ಟೇ. ಕೆಳಗಿನ ಚಿತ್ರದಲ್ಲಿ ಮೊದಲನೆಯದಾಗಿ ಹುಟ್ಟಿದ ಮರಿ ಹುಳ ತಿನ್ನುವಷ್ಟು ಸಮರ್ಥವಾಗಿ ಬೆಳೆದಿದ್ದು, ಎರಡನೆಯದಾಗಿ ಹೊರಬಂದ ಮರಿಗೆ ಚಿಕ್ಕ ಚಿಕ್ಕ ಪುಕ್ಕಗಳು ಬಂದಿವೆ. ಮೂರನೆಯ ಮರಿಗೆ ಇನ್ನೂ ಪುಕ್ಕಗಳೇ ಬಂದಿಲ್ಲ.

 535802_360449334004384_2054146526_n

537525_360450007337650_817448813_n

536667_360454020670582_1092455457_n

536079_360454144003903_1032060456_n

550822_360453887337262_2102754533_n

ಹಕ್ಕಿ ಮರಿ ಹಾರಲು ಕಲಿತಾಗ..:)

Red Whiskered Bulbul..

                    Red whiskered bulbul..

Red whiskered bulbul..

ತೀರ್ಥಹಳ್ಳಿಯ ಸಮೀಪದ ಊರುಗಳಲ್ಲಿ ಹೆಚ್ಚಾಗಿ Red Whiskered Bulbul ಕಂಡುಬರುತ್ತವೆ. ತಲೆಯ ಮೇಲೊಂದು ಜುಟ್ಟು, ಕಂದು ಬಣ್ಣದ ಬೆನ್ನು,ರೆಕ್ಕೆ ಇರುವ ಇದರ ಎದೆಯ ಭಾಗ ಬಿಳಿಯ ಬಣ್ಣ.ಕಣ್ಣಿನ ಕೆಳಗೆ ಹಾಗೂ ಬಾಲದ ಬಳಿ (vent) ಕೆಂಪು ಬಣ್ಣವಿರುತ್ತದೆ.ಜೋಡಿಯಾಗಿ ಹೆಚ್ಚಾಗಿ ಮನೆಯ ಹತ್ತಿರದ ತೋಟಗಳಲ್ಲಿ, ಹೂವಿನ ಗಿಡಗಳ ನಡುವೆ ಕಾಣಬಹುದು.ಯಾವಾಗಲೂ ಸದ್ದು ಮಾಡುತ್ತಾ ಚಿಕ್ಕ ಚಿಕ್ಕ ಕೀಟಗಳನ್ನು , ಹಣ್ಣುಗಳನ್ನು ತಿನ್ನುತ್ತಾ ಗಿಡದಿಂದ ಗಿಡಕ್ಕೆ ಹಾರುತ್ತಿರುತ್ತವೆ. ಅಪಾಯ ಎದುರಾದಾಗ, ಅವುಗಳ ಗೂಡಿನ ಸಮೀಪಕ್ಕೆ ಶತ್ರುಗಳು ಹೋದಾಗ ಒಂದೇ ಸಮನೆ ಕೂಗಲು ಪ್ರಾರಂಭಿಸುತ್ತವೆ. ಗೂಡು ಹುಡುಕಿಕೊಂಡು ಹೋಗಿದ್ದ ನನಗೆ ಇದರ ಅನುಭವವಿದೆ.

                                                   eggs..

eggs..

ಸಣ್ಣ ಸಣ್ಣ ಪೊದೆಗಳಲ್ಲಿ, ಹೂವಿನ ಗಿಡಗಳಲ್ಲಿ, ಬಾಳೆಯ ಗಿಡಗಳ ಮದ್ಯದಲ್ಲಿ ಸಹ  ಹುಲ್ಲು ಪಾಚಿಗಳನ್ನು ಬಳಸಿಕೊಂಡು ಚಿಕ್ಕಬಟ್ಟಲಿನಾಕಾರದ ಗೂಡು ಕಟ್ಟುತ್ತವೆ. ಒಂದು ಸಲಕ್ಕೆ ಎರಡರಿಂದ ಮೂರು ಮೊಟ್ಟೆಗಳನ್ನು ಇಡುವ ಇವುಗಳು ಡಿಸೆಂಬರ್ ಇಂದ , ಮೇ ವರೆಗೂ ಗೂಡು ಕಟ್ಟಿ ಮರಿ ಮಾಡುವುದನ್ನು ಕಾಣಬಹುದು.ಬಿಳಿಯ ಬಣ್ಣದ ಮೊಟ್ಟೆಗಳ ಮೇಲೆ ಕೆಂಪು  ಚುಕ್ಕಿಗಳಿರುತ್ತವೆ. ಕಾಗೆ, ಕೆಂಬತ್ತದಂತಹ ದೊಡ್ಡ ಹಕ್ಕಿಗಳು, ಇವುಗಳ  ಮೊಟ್ಟೆ,ಮರಿಗಳನ್ನು ಆಹಾರವಾಗಿ ಬಳಸಿಕೊಳ್ಳುತ್ತವೆ. ಅದಲ್ಲದೆ ಹಾವುಗಳಿಗೂ ಇವು ಆಹಾರವಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ bulbul ಗಳು ಹೆಚ್ಚಾಗಿ ಮನುಷ್ಯ ವಾಸದ ಬಳಿ ಗೂಡು ಕಟ್ಟುವುದನ್ನು ಕಾಣಬಹುದು.

bulbul

ನಮ್ಮ ಊರಿನಲ್ಲಿ ಒಂದು ದೇವಸ್ತಾನವಿದೆ. ಬೇಸಿಗೆ ರಜೆಯ ಸಮಯ. ನಾವು ಗೆಳೆಯರೆಲ್ಲ ಸೇರಿ ದೇವಸ್ತಾನಕ್ಕೆ ಹೋಗಿದ್ದೆವು. ಏಪ್ರಿಲ್,ಮೇ ತಿಂಗಳ ಬಿರುಬಿಸಿಲು. ನೆರಳಿರಲಿ ಎಂದು ಅಲ್ಲಿ ಅಡಿಕೆ ಮರದ ಸೋಗೆಗಳಿಂದ ಚಪ್ಪರ ಮಾಡಿದ್ದರು. ನಮ್ಮ ಕೈಗೆ ಸಿಗುವಂತೇನು ಇರಲಿಲ್ಲ. ನೋಡುತ್ತಿದ್ದಂತೇ ಒಂದು bulbul ಹಕ್ಕಿ ಬಂದಿತು. ಬಂದು ಆ ಕಡೆ ಈ ಕಡೆ ಅಲೆದಂತೆ ಮಾಡಿ ಚಪ್ಪರದಲ್ಲೆಲ್ಲೋ ಮರೆಯಾಯಿತು. ನಮಗೆ ಅದರ  ಗೂಡು ಇಲ್ಲೆ ಎಲ್ಲೋ ಇದೆ ಎಂದು ಖಾತ್ರಿಯಾಯಿತು. ಸುಮ್ಮನಿರಲಾರದೆ ಹುಡುಕಿದಾಗ ಚಪ್ಪರದ ಗರಿಗಳ ನಡುವೆ ಒಂದು ಗೂಡು.!! ನಮಗೆ ಗೂಡಿನ ಒಳಭಾಗ ಕಾಣುತ್ತಿರಲಿಲ್ಲ. ಕೈಗೆ ಸಿಗುವಂತೆಯೂ ಇರಲಿಲ್ಲ. ಕೊನೆಗೆ ಒಂದು ಕೋಲು ತೆಗೆದುಕೊಂಡು ದೂಡಿ ನೋಡಿದೆವು. ಒಂದೆರಡುಸಾರಿ ದೂಡಿದ ಮೇಲೆ ಗೂಡು ಕೆಳಗೆ ಬಿತ್ತು. ಹಕ್ಕಿಗಳು ಗಾಬರಿಯಿಂದ ಕೂಗತೊಡಗಿದವು. ಕೆಳಗೆ ಬಿದ್ದ ಗೂಡಿನಿಂದ ಮೂರು ಮೊಟ್ಟೆಗಳೂ ಬಿದ್ದು ಒಡೆದು ಹೋಗಿದ್ದವು. ಅದರಲ್ಲಿ ಅರೆ ಬೆಳೆದ ಮರಿಗಳು. ಅವತ್ತು ಆ ಮರಿಗಳ ಸಾವಿಗೆ ಕಾರಣ ನಾವೆಂದು ಯೋಚಿಸಿದಾಗ ವಿಷಾದವೆನಿಸುತ್ತದೆ.

Photo Courtesy: Google

BULBUL birds..

BulBul  ಹಕ್ಕಿಗಳಿಗೆ ಕನ್ನಡದಲ್ಲಿ ಪಿಕಳಾರಗಳೆಂದು ಹೆಸರು. ಇದರಲ್ಲಿ ಹಲವಾರು ವಿಧಗಳಿದ್ದರೂ  ಹೆಚ್ಚಾಗಿ ಕಾಣುವುದು ಕೆಲವು  ಮಾತ್ರ . ನಮ್ಮ ಮನೆಯ ಸುತ್ತ ಮುತ್ತ ಬೇರೆ ಹಕ್ಕಿಗಳಿಗಿಂತ ಬುಲ್‌ಬುಲ್ ಗಳೇ ಹೆಚ್ಚಾಗಿ ಕಾಣಸಿಗುತ್ತವೆ.

ಈ ಹಕ್ಕಿಯ ಹೆಚ್ಚಿನ ಪರಿಚಯವಾದದ್ದು ಹೀಗೆ.ನಮ್ಮ ಹಿತ್ತಲಲ್ಲಿ ತರಕಾರಿ ಗಿಡಗಳಿದ್ದವು. ಜೊತೆಗೆ ಪೇರಳೆ,ಚಿಕ್ಕು ಮುಂತಾದ ಹಣ್ಣಿನ ಗಿಡಗಳೂ ಇದ್ದವು. ಬೀನ್ಸ್ ,ಅಲಸಂದೆಯಂತಹ ತರಕಾರಿ ಗಿಡಗಳು  ಹೂವು ಬಿಡಲು ಪ್ರಾರಂಭಿಸಿದಾಗ ಬುಲ್‌ಬುಲ್ ಹಕ್ಕಿಗಳ ದಂಡೇ ಆಗಮಿಸುತ್ತಿತ್ತು. ಒಂದೇ ಒಂದು ಹೂವನ್ನೂ ಬಿಡದಂತೆ ತಿಂದು ಜಾಗ ಖಾಲಿ ಮಾಡುತ್ತಿದ್ದ ಇವುಗಳನ್ನು ಓಡಿಸುವುದೇ ದೊಡ್ಡ ಕಷ್ಟ. ಕೊನೆಗೆ ಇವುಗಳ ಕಾಟ ತಡೆಯಲಾರದೆ ತರಕಾರಿಗಳನ್ನು ಬೆಳೆಸುವುದು ಬಿಡಬೇಕಾಯಿತು.ಚಿಕ್ಕು ಮರದಲ್ಲಿ ಹೂವು ಕಾಯಾದ ಕೂಡಲೇ ಅವುಗಳಿಗೆ ಸುದ್ದಿ ಮುಟ್ಟುತ್ತಿತ್ತು. ಸದ್ದಿಲ್ಲದೆ ಬಂದು ಚಿಗುರು ಕಾಯಿಗಳನ್ನೇ  ಕುಕ್ಕಿಕುಕ್ಕಿ ತಿನ್ನುತ್ತಿದ್ದವು. ಇನ್ನೂ ಹಣ್ಣಾಗದ  ಆ ಕಾಯಿಗಳ ಮೇಲೆ ಅದೆಷ್ಟು ಪ್ರೀತಿಯೋ ಅವುಗಳಿಗೆ .! ಎಲ್ಲ ಕಾಯಿಗಳ ರುಚಿ ನೋಡಿ ಹಾಳು ಮಾಡಿ ಹಾರುತ್ತಿದ್ದವು. ಒಂದು ಹಣ್ಣು ಸಹ ನಮಗೆ ತಿನ್ನಲು ಸಿಗುತ್ತಿರಲಿಲ್ಲ. ಆಗೆಲ್ಲ ನನಗೆ ಈ ಹಕ್ಕಿಯ ಹೆಸರು ಗೊತ್ತಿರಲಿಲ್ಲ. ತಲೆಯ ಮೇಲೊಂದು ಜುಟ್ಟು ಇರುವುದರಿಂದ ಜುಟ್ಟಿನ ಹಕ್ಕಿ ಎಂದೇ ಕರೆಯುತ್ತಿದ್ದೆ.

ಹಕ್ಕಿಗಳ ಬಗೆಗೆ ಹೆಚ್ಚಿನ ಆಸಕ್ತಿ ಬಂದಿದ್ದು ತೀರಾ ಇತ್ತೀಚೆಗೆ. ಗೆಳೆಯರೊಂದಿಗೆ ಚಾರಣಕ್ಕೆ ಹೋದಾಗ ಹಕ್ಕಿಗಳನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೆ. ಗೊತ್ತಾಗದಿದ್ದಾಗ ಹಕ್ಕಿಗಳ  ಬಣ್ಣ, ಆಕಾರ ಎಲ್ಲವನ್ನೂ ಗುರುತಿಸಿಕೊಂಡು Google ಮಾಡುತ್ತಿದ್ದೆ. ಹೀಗೆ ಹುಡುಕುತ್ತಿದ್ದಾಗ ಗೊತ್ತಾಗಿದ್ದು ಬುಲ್‌ಬುಲ್ ಹಕ್ಕಿಯ ಬೇರೆ ಬೇರೆ ವಿಧಗಳು. ಭಾರತದಲ್ಲಿ ಎಷ್ಟೋ ರೀತಿಯ ಬುಲ್‌ಬುಲ್ ಗಳಿದ್ದರೂ ನಾನು ಕಂಡ ಕೆಲವು ಪಕ್ಷಿಗಳ ಬಗ್ಗೆ ಮಾತ್ರವೇ ಪ್ರಸ್ಥಾಪಿಸುತ್ತೇನೆ.

PHOTO GALLERY : 

Red-whiskered_Bulbul-web

Red whiskered bulbul

Red vented Bulbul

Red vented Bulbul

d97a185d8549af18aeb1bac5069bd2c2

Ruby throated bulbul

1024px-White-browed_Bulbul_(_Pycnonotus_luteolus)

White browed bulbul

black-crested_bulbul_01

black crested yellow bulbul

Yellow browed bulbul

yellow browed bulbul

White eared bulbul

White eared bulbul

2ad9b4806b18e3133746aad70edb9f8d

Striated bulbul

Black bulbul

Black bulbul

             Yellow throated bulbul

Yellow throated bulbul

Photo Courtesy : Google